ವೀಡಿಯೋ ಆಲ್ಬಂನಲ್ಲಿ ಅದಿತಿ ಪ್ರಭುದೇವ ಮಿಂಚಿಂಗ್ ! ಬೆಂಗಳೂರು, ಅಕ್ಟೋಬರ್ 05, 2020 (..):ನಟಿ ಅದಿತಿ ಪ್ರಭುದೇವ ಹೊಸ ವೀಡಿಯೋ ಸಾಂಗ್ ವೊಂದರಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಹೌದು. ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿರುವ ನಟಿ ಅದಿತಿ ಪ್ರಭುದೇವ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ‘ ಪರ್ಫೆಕ್ಸ್ ಗರ್ಲ್ ‘ ಎಂಬ ವಿಡಿಯೋ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಮಠದ್ ನಿರ್ದೇಶನದ ಈ ಆಲ್ಬಂ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ .