ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐನಿಂದ ಎಫ್ ಐಆರ್ ದಾಖಲು… ಬೆಂಗಳೂರು ಅಕ್ಟೋಬರ್,5,2020(..): ಇಂದು ಬೆಳ್ಳಂಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನಿವಾಸ ಸೇರಿ ಹಲವೆಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದು ಈ ನಡುವೆ ಸಿಬಿಐ ಘಟಕದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ಬೆಂಗಳೂರಿನ ಸಿಬಿಐ ಘಟಕದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭ್ರಷ್ಟಾಚಾರ ತಡೆಕಾಯ್ದೆಯಡಿ ಸಿಬಿಐ ಎಫ್ ಐಆರ್ ದಾಖಲಿಸಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ.ಕೆ ಶಿವಕುಮಾರ್ ಮನೆ ಸೇರಿ ಹಲವೆಡೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮತ್ತೊಂದೆ, ಸಂಸದ ಡಿ.ಕೆ ಸುರೇಶ್ ಅವರ ಕನಕಪುರ ತಾಲೂಕಿನ ಕೆಂಚೇನಹಳ್ಳಿ ಮನೆ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಬೆಳಿಗೆ 6 ಗಂಟೆಗೆ ದಾಳಿ ಮಾಡಿದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. : - – –- - .