ಅಪಘಾತ ಪವರ್ ಟಿವಿ ಕ್ಯಾಮರಮೆನ್ ಸುನೀಲ್ ಪಾಚಂ ಸಾವು ಹುಬ್ಬಳ್ಳಿ, ಅಕ್ಟೊಂಬರ್,04,2020(..): ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ್ ಟಿವಿ ಕ್ಯಾಮರಮೆನ್ ಸುನೀಲ್ ಪಾಚಂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಹುಬ್ಬಳ್ಳಿಯಲ್ಲಿ ಪವರ್ ಟಿವಿ ಕ್ಯಾಮರಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೈಕ್ ನಲ್ಲಿ ತೆರಳುವಾಗ ಎರಡು ಬೈಕ್ ಗಳ ನಡುವೆ ಮುಖಾ,ಮುಖಿ ಡಿಕ್ಕಿಯಾಗಿ ತಲೆಗೆ ಪೆಟ್ಟುಬಿದ್ದು, ತೀವ್ರ ಗಾಯಗೊಂಡಿದ್ದರು. ಗಾಯಗೊಂಡ ಇವರನ್ನು ಕಿಮ್ಸ್ ಆಸ್ಪತ್ರೆಯ ತೀವ್ರ ನಿಘ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸುನೀಲ್ ಕೊನೆಯುಸಿರೆಳೆದಿದ್ದಾರೆ. : -- - -