ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ : ಸಚಿವ ಆನಂದ್ ಸಿಂಗ್ ಬೆಂಗಳೂರು,ಅಕ್ಟೊಂಬರ್,04,2020(..): ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಮ್ಮ ಸರಕಾರ ಅವಧಿ ಪೂರ್ಣಗೊಳಿಸುತ್ತದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಸರ್ಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಎಂದು ಹೇಳಿಲ್ಲ. ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದರು. ನಾನು ಹೇಳಿಕೆ ನೀಡಿದ್ದು, ನಾನು ಈ ಇಲಾಖೆಯಲ್ಲಿ ಎಷ್ಟು ದಿವಸ ಇರುತ್ತೇನೋ, ಇಲ್ಲವೋ? ಎಂಬುದು ನನಗೆ ತಿಳಿದಿಲ್ಲ. ಕ್ಷೇತ್ರದಲ್ಲಿ ಆಯೋಜನೆಯಾದ ಇಲಾಖೆಯ ಮೊದಲ ಕಾರ್ಯಕ್ರಮವಾಗಿದ್ದರಿಂದ, ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುವದೇ ಇಲ್ಲಿ ತಪ್ಪದೆ ಭಾಗವಹಿಸಿದ್ದೇನೆ ಎಂದರು. ಸರ್ಕಾರಗಳು ಬರುತ್ತವೆ. ಹೋಗುತ್ತವೆ. ಆದರೆ, ಇಲಾಖೆಯ ಅಭಿವೃದ್ಧಿಯ ಜೊತೆಗೆ ಕ್ಷೇತ್ರ ಹಾಗೂ ಕ್ಷೇತ್ರದ ಜನರ ಹಿತಾಸಕ್ತಿಗಳನ್ನು ಯಾವಾಗಲೂ ಜನಪ್ರತಿನಿಧಿಗಳಾದ ನಾವು ಕಾಪಾಡಬೇಕು ಎಂಬರ್ಥದಲ್ಲಿ ಹೇಳಿದ್ದು, ನಮ್ಮ ಸರ್ಕಾರ ಪೂರ್ಣ ಅವಧಿ ಮುಗಿಸಿ, ಮುಂದಿನ ಬಾರಿಯೂ ಸಹ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬುದನ್ನು ನಾಣು ಮಾಧ್ಯಮ ಮಿತ್ರರಿಗೆ ಹಾಗೂ ರಾಝ್ಯದ ಜನತೆಗೆ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರವು ಅವಧಿಯನ್ನು ಪೂರ್ಣಗೊಳಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ. : ----