ಮಾಟಮಂತ್ರದಿಂದಾಗಿ ನನ್ನ ಪತ್ನಿ ಬದಲಾಗಿದ್ದಾರೆ : ಕೆ.ಕಲ್ಯಾಣ ಆರೋಪ ಬೆಳಗಾವಿ,ಅಕ್ಟೊಂಬರ್,04,2020(,.): ನನ್ನ ಪತ್ನಿ ತುಂಬಾ ಒಳ್ಳೆಯವರು. ಮಾಟಮಂತ್ರದಿಂದಾಗಿ ಅವರು ಬದಲಾಗಿದ್ದಾರೆ. ಮಾಟಮಂತ್ರ ಮಾಡಿರುವ ಗಂಗಾ ಮತ್ತು ಶಿವಾನಂದ ವಾಲಿ ದೂರು ದಾಖಲಿಸುತ್ತೇನೆ ಎಂದು ಚಿತ್ರಸಾಹಿತಿ ಕೆ.ಕಲ್ಯಾಣ್ ಆರೋಪಿಸಿದರು.ನಮ್ಮ ಮದುವೆಯಾಗಿ 15 ವರ್ಷವಾಗಿದೆ. ನನ್ನ ಪತ್ನಿ ಅಶ್ವಿನಿ ತುಂಬಾ ಒಳ್ಳೆಯವರು. ಮನೆಕೆಲಸಕ್ಕೆಂದು ಬಂದವರು ಮಾಟಮಂತ್ರ ಮಾಡುವ ಮೂಲಕ ನನ್ನ ಪತ್ನಿಯ ತಲೆ ಕೆಡಿಸಿದ್ದಾರೆ. ಇಂದು ನನ್ನ ಪತ್ನಿ ಅಪರಿಚಿತವ್ಯಕ್ತಿಯಂತೆ ಮಾತಾಡಿಸುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. ನಮ್ಮಿಬ್ಬರಲ್ಲಿ ಯಾವುದೇ ಗೊಂದಲವಿಲ್ಲ. ನನ್ನ ಪತ್ನಿಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ದಾಂಪತ್ಯ ಕಲಹದ ಹಿಂದೆ ಯಾರದೋ ಕೈವಾಡವಿದೆ ಎಂದು ದೂರಿದ್ದಾರೆ. : --- -.-