ಫೇಕ್ ನ್ಯೂಸ್ ಸೃಷ್ಟಿಸಿದ ಆರೋಪ: ಬಿಜೆಪಿ ವಿರುದ್ದ ಕಾಂಗ್ರೆಸ್ ದೂರು. ಬೆಂಗಳೂರು,ಏಪ್ರಿಲ್,10,2024 (..):ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್, ಫೇಕ್ ನ್ಯೂಸ್ ಸೃಷ್ಠಿಸಿದ ಆರೋಪದ ಮೇಲೆ ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ದ ಕಾಂಗ್ರೆಸ್ ದೂರು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಮುಖಂಡರಾದ ರಮೇಶ್ ಬಾಬು, ವಿಜಯ ಮತ್ತಿಕಟ್ಟಿ, ರವಿ ಹಾಗೂ ದಿವಾಕರ್ ಅವರು ಇದೀಗ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರು ಸಲ್ಲಿಸಿದ ಬಳಿಕ ಈ ಕುರಿತು ಮಾತನಾಡಿದ ರಮೇಶ್ ಬಾಬು, ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಿಂದೂಗಳೇ ಬಿಜೆಪಿಗೆ ಬೇನಾಮಿ ಹೆಸರಲ್ಲಿ ಕಾಂಗ್ರೆಸ್ ಟೀಕಿಸುವ ಕಾಯಿಲೆ. ಇದೆ ಸಿಎಂ ಸಿದ್ದರಾಮಯ್ಯ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿ ಮಾಡಲಾಗಿದೆ ಎಂದರು. ಬಿಜೆಪಿ ಅಧಿಕೃತ ಅಕೌಂಟ್ ಗಳಿಂದಲೇ ಫೇಕ್ ಸುದ್ದಿ ಹರಡಲಾಗುತ್ತಿದೆ. ಇದರ ಹಿಂದೆ ಬಿಜೆಪಿ ನಾಯಕರು ಇರಬಹುದೆಂಬ ಅನುಮಾನ ಇದೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದು ತಿಳಿಸಿದರು. : , , ,