ಡ್ರಗ್ಸ್ ಮಾಫಿಯಾ ಚೈನ್ ಲಿಂಕ್ ಮುಕ್ತಾಯವಾಗುವವರೆಗೂ ವಿಚಾರಣೆ : ಪೊಲೀಸ್ ಆಯುಕ್ತ ವಿಕಾಸ ಕುಮಾರ್ ಮಂಗಳೂರು,ಅಕ್ಟೊಂಬರ್,03,2020(..): ಡ್ರಗ್ಸ್ ಮಾಫಿಯಾ ಚೈನ್ ಲಿಂಕ್ ಮುಕ್ತಾಯಗೊಳ್ಳುವವರೆಗೂ ವಿಚಾರಣೆ ಮಾಡುತ್ತೇವೆ. ಮಾಹಿತಿಗಾಗಿ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ ಕುಮಾರ್ ಹೇಳಿದ್ದಾರೆ.ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ತನಿಖೆಯು ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಮಾಫಿಯಾವು ಚೈನ್ ಲಿಂಕ್ ಮಾದರಿಯಲ್ಲಿ ಸಾಗುತ್ತಿದೆ. ಹೀಗಾಗಿ, ಈ ಚೈನ್ ಲಿಂಕ್ ಮುಕ್ತಾಯವಾಗುವವರೆಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಮಾಹಿತಿಯ ಅಗತ್ಯವಿದ್ದರೆ, ಈಗಾಗಲೇ ವಿಚಾರಣೆಗೆ ಹಾಜರಾಗಿರುವವರಿಗೆ ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು. : -- ---- -