ಬಂಧನವಾಗುತ್ತೇನೆ ಎಂದು ಗೊತ್ತಾದ ತಕ್ಷಣವೇ ಹೊಸ ಡ್ರಾಮಾ: ಟ್ವೀಟ್ ಮೂಲಕ ನಿರೂಪಕಿ ಅನುಶ್ರೀಗೆ ಪ್ರಶಾಂತ್ ಸಂಬರಗಿ ಟಾಂಗ್… ಬೆಂಗಳೂರು,ಅಕ್ಟೊಂಬರ್,03,2020(..): ಬಂಧನವಾಗುತ್ತೇನೆ ಎಂದು ಗೊತ್ತಾದ ಕ್ಷಣವೇ, ನನಗೆ ಕೊರೊನಾ ಬಂದಿದೆ. ನನ್ನ ಹತ್ತಿರ ಬರಬೇಡಿ ಎಂದು ಹೊಸ ಡ್ರಾಮಾ ಪ್ರದರ್ಶನವಾಗುತ್ತದೆ ಎಂದು ನಟಿ, ನಿರೂಪಕಿ ಅನುಶ್ರೀ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ,ನಿರೂಪಕಿ ಅನುಶ್ರೀ ಅವರ ಮೇಲೂ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಪ್ರಶಾಂತ್ ಸಂಬರಗಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದು, 24 ರಿಂದ 48 ಗಂಟೆಯೊಳಗೆ ನಟಿ,ನಿರೂಪಕಿ ಅನುಶ್ರೀ ಅವರನ್ನು ಬಂಧಿಸಲಾಗುವುದು. ಇದು ಸತ್ಯವಾಗಿದ್ದು, ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಪೊಲೀಸರು ಬಂಧಿಸುತ್ತಾರೆ ಎಂಬ ಮಾಹಿತಿ ತಿಳಿದ ತಕ್ಷಣವೇ, ನನೆಗ ಕೊರೊನಾ ಬಂದಿದೆ. ನನ್ನ ಹತ್ತಿರ ಬರಬೇಡಿ ಎಂದು ನಾಟಕದ ರಾಣಿಯ ಹೊಸ ಅವತಾರ ಆರಂಭವಾಗುತ್ತದೆ ಎಂದು ಕಿಡಿಕಾರಿದ್ದಾರೆ. : -------