ಮೈಸೂರಿನಲ್ಲಿ ನೂತನ ಪ್ಲಾಸ್ಮಾ ಕೇಂದ್ರ ಉದ್ಘಾಟನೆ… ಮೈಸೂರು, ಅಕ್ಟೋಬರ್,2,2020(..):ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ಪ್ಲಾಸ್ಮಾ ಕೇಂದ್ರವನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಿದರು. ಕೊರೋನಾ ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ನೆರವಾಗುವ ಹಿನ್ನೆಲೆ, ಕೆ. ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ನೂತನ ಪ್ಲಾಸ್ಮಾ ಘಟಕ ಪ್ರಾರಂಭ ಮಾಡಲಾಗಿದೆ. ಐಕ್ಯಾಟ್ ಏರ್ ಆ್ಯಂಬ್ಯುಲೆನ್ಸ್ ಸಂಸ್ಥೆ ವತಿಯಿಂದ 22 ಲಕ್ಷ ರೂ ಮೌಲ್ಯದ ಪ್ಲಾಸ್ಮಾ ಬೇರ್ಪಡಿಸುವ ಯಂತ್ರವನ್ನ ನೀಡಲಾಗಿದೆ. ಈ ಪ್ಲಾಸ್ಮಾ ಕೇಂದ್ರವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ಸೇರಿದಂತೆ ಕೆ. ಆರ್. ಆಸ್ಪತ್ರೆ ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು. : –- – - --