ಸರ್ಕಾರಗಳು ಎಲ್ಲಿಯವರೆಗೆ ಇರುತ್ತೋ, ಹೋಗುತ್ತೋ ಯಾರಿಗೂ ಗೊತ್ತಿಲ್ಲ : ಸಚಿವ ಆನಂದ್ ಸಿಂಗ್ ಬೆಂಗಳೂರು,ಅಕ್ಟೊಂಬರ್,02,2020(..): ಸರ್ಕಾರಗಳು ಎಲ್ಲಿಯವರೆಗೆ ಇರುತ್ತೋ, ಹೋಗುತ್ತೋ ಯಾರಿಗೂ ಗೊತ್ತಿಲ್ಲ. ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.ಬೆಂಗಳೂರಿನ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಬೇಕಿತ್ತು. ಆದರೆ, ನನ್ನ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಹೀಗಾಗಿ, ಬೆಂಗಳೂರಿಗೆ ತೆರಳದೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದಿದ್ದಾರೆ.ಅಷ್ಟು ಮಾತ್ರವಲ್ಲದೇ, ಸರ್ಕಾರಗಳು ಯಾವಾಗ ಬರುತ್ತವೋ, ಹೋಗುತ್ತವೋ ಯಾರಿಗೂ ಗೊತ್ತಿಲ್ಲ. ಹೀಗಾಗಿ, ನಮ್ಮ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. : ----