ಶಿರಾ ಬೈ ಎಲೆಕ್ಷನ್: ಕೊರೊನಾ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ- ಡಿಸಿ ಡಾ.ರಾಕೇಶ್ ಎಚ್ಚರಿಕೆ ತುಮಕೂರು,ಅಕ್ಟೊಂಬರ್,01,2020(..): ನವೆಂಬರ್ 3ರಂದು ಶಿರಾ ಉಪಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಎಂದು ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಹೇಳಿದ್ದಾರೆ.ಶಿರಾ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜಕೀಯ ಪಕ್ಷದ ನಾಯಕರು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದಿದ್ದಾರೆ.ಒಳಾಂಗಣ ಕಾರ್ಯಕ್ರಮದಲ್ಲಿ 200 ಮಂದಿ ಸೇರುವುದಕ್ಕೆ ಅವಕಾಶ ನೀಡಿದ್ದು, ಹೊರಾಂಗಣ ಸಭೆ, ಸಮಾರಂಭದಲ್ಲಿ ಜನಸಂಖ್ಯೆಗೆ ಮಿತಿ ಇಲ್ಲ. ಆದರೆ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. : ----- -.-