ಮೈಸೂರು ದಸರಾ: ನಾಳೆ ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ ಅಭಿಮನ್ಯು ಅಂಡ್ ಟೀಮ್… ಮೈಸೂರು,ಸೆಪ್ಟಂಬರ್,30,2020(..):ಕೊರೋನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸಲು ಸರ್ಕಾರ ಮುಂದಾಗಿದ್ದು ಈ ನಡುವೆ ದಸರಾದಲ್ಲಿ ಪಾಲ್ಗೊಳ್ಳಲು ನಾಳೆ ಅಭಿಮನ್ಯು ಅಂಡ್ ಟೀಮ್ ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ. ನಾಳೆ ವೀರನಹೊಸಹಳ್ಳಿಯಲ್ಲಿ ಬೆಳಗ್ಗೆ 10 ರಿಂದ 11 ರ ಒಳಗೆ ಗಜಪಯಣಕ್ಕೆ ಪೂಜೆ ಸಲ್ಲಿಸಲಿದ್ದು ಬಳಿಕ ಅಭಿಮನ್ಯು ಅಂಡ್ ಟೀಮ್ ಸಾಂಸ್ಕೃತಿಕ ನಗರಿಯತ್ತ ಪಯಣ ಬೆಳೆಸಲಿವೆ.ಸಾಂಪ್ರದಾಯಿಕ ಪೂಜೆ ಬಳಿಕ ದಸರಾ ಆನೆಗಳು ನಾಡಿನತ್ತ ಹೆಜ್ಜೆ ಹಾಕಲಿದ್ದು, ಮೈಸೂರಿನ ಅರಣ್ಯ ಭವನದ ಅಂಗಳಕ್ಕೆ ಬಂದಿಳಿಯಲಿವೆ. ಕ್ಯಾಪ್ಟನ್ ಅಭಿಮನ್ಯು ಜೊತೆ ವಿಕ್ರಮ , ಗೋಪಿ ವಿಜಯಾ ಕಾವೇರಿ ಆನೆಗಳು ಸಹ ಆಗಮಿಸಲಿವೆ. ಇನ್ನು ಗಜಪಯಣದ ಬಳಿಕ ದಸರಾ ಸಂಭ್ರಮ ಕಳೆಗಟ್ಟಲಿದೆ. ಈ ಬಾರಿ ಸರಳ ಮತ್ತು ಸಾಂಪ್ರದಾಯಕ ದಸರಾ ಆಚರಣೆ ಹಿನ್ನೆಲೆ ಜಂಬೂ ಸವಾರಿ ಅರಮನೆ ಅವರಣಕ್ಕೆ ಸೀಮಿತವಾಗಲಿದೆ. : - -2020--- -