ಬಿಜೆಪಿ ಅಭ್ಯರ್ಥಿ ಯಾರೆಂಬ ಬಗ್ಗೆ ವರಿಷ್ಠರಿಂದ ನಿರ್ಧಾರ –ಟಿಕೆಟ್ ಆಕಾಂಕ್ಷಿ ಮುನಿರತ್ನ ಹೇಳಿಕೆ… ಬೆಂಗಳೂರು,ಸೆಪ್ಟಂಬರ್,30,2020(..):ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಟಿಕೆಟ್ ಆಕಾಂಕ್ಷಿ ಮುನಿರತ್ನ ತಿಳಿಸಿದ್ದಾರೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮುನಿರತ್ನ, ಬಿಜೆಪಿಗೆ ಬಂದವರಿಗೆ ಅನ್ಯಾಯ ಮಾಡಲ್ಲ ಎಂದು ನಾವು ಬಿಜೆಪಿಗೆ ಸೇರ್ಪಡೆಯಾಗುವಾಗ ಅಮಿತ್ ಶಾ ಹೇಳಿದ್ದರು. ಬಿಜೆಪಿ ಎಂದಿಗೂ ಕೊಟ್ಟ ಮಾತಿನ ಮೇಲೆ ನಿಲ್ಲುವ ಪಕ್ಷ ಎಂದು ಹೇಳಿದರು. ಆರ್ ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎಂಬುದನ್ನು ವರಿಷ್ಠರಿಗೆ ಕೇಳಬೇಕು. ಟಿಕೆಟ್ ನೀಡುವ ಬಗ್ಗೆ ಅವರೇ ನಿರ್ಧಾರ ಮಾಡುತ್ತಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನಿರತ್ನ ತಿಳಿಸಿದರು. ನವೆಂಬರ್ 3ರಂದು ರಾಜ್ಯದ ಎರಡು ಕ್ಷೇತ್ರಗಳಾದ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ, : - –- – -