‘ಕಸ್ತೂರಿ ಮಹಲ್‌’ನ ಸಾನ್ವಿ ಫಸ್ಟ್ ಲುಕ್ ರಿಲೀಸ್ ಬೆಂಗಳೂರು, ಸೆಪ್ಟೆಂಬರ್ 29, 2020 (..): ಕಸ್ತೂರಿ ಮಹಲ್‌ ಚಿತ್ರ ತಂಡ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದೆ. ಹೌದು. ಇದೀಗ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು, ಈ ಬಗ್ಗೆ ಟ್ವೀಟರ್‌ನಲ್ಲಿ ಶಾನ್ವಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೊದಲು ರಚಿತಾ ರಾಮ್‌ ಆಯ್ಕೆಯಾಗಿದ್ದರು, ಆದ್ರೆ ಡೇಟ್ಸ್‌ ಹೊಂದಾಣಿಕೆಯಾಗದ ಕಾರಣ ಚಿತ್ರದಿಂದ ರಚಿತಾ ರಾಮ್‌ ಹೊರ ಬಂದಿದ್ರು, ಇನ್ನು ಆ ಜಾಗಕ್ಕೆ ಶಾನ್ವಿ ಶ್ರೀವತ್ಸ ಎಂಟ್ರಿಕೊಟ್ಟಿದ್ದರು. ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ #ಕಸ್ತೂರಿಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ ಎಂದು ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.