ಶಾಲಾ, ಕಾಲೇಜು ಆರಂಭಕ್ಕೆ ವಿರೋಧ : ಶಾಸಕ ಪ್ರಿಯಾಂಕ್ ಖರ್ಗೆ ಬೆಂಗಳೂರು,ಸೆಪ್ಟೆಂಬರ್,29,2020(..): ಶಾಲಾ, ಕಾಲೇಜು ಆರಂಭಕ್ಕೆ ವಿರೋಧವಿದ್ದು, ಶಾಲೆ, ಕಾಲೇಜು ಆರಂಭ ಸಂಬಂಧಿಸಿದಂತೆ ಸರಕಾರವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಶಾಲೆ,ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಿ, ಅಭಿಪ್ರಾಯ ಸಂಗ್ರಹಿಸಲಿ. ಬಳಿಕ ಶಾಲೆ ತೆರೆಯುವುದರ ಸಂಬಂಧ ನಿರ್ಧಾರ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ. ; -----