ಚಿರತೆ ದಾಳಿಗೆ ಆರು ಮೇಕೆಗಳು ಬಲಿ : ಜನರಲ್ಲಿ ಆತಂಕ… ಮಂಡ್ಯ,ಸೆಪ್ಟಂಬರ್.29,2020(..):ಚಿರತೆ ದಾಳಿಗೆ ಆರು ಮೇಕೆಗಳು ಬಲಿಯಾಗಿರುವ ಘಟನೆ ಹಲಗೂರು ಹೋಬಳಿಯ ಕಾಡಂಚಿನ ಗ್ರಾಮ ಬ್ಯಾಡರಹಳ್ಳಿ ಸಮೀಪ ನಡೆದಿದೆ. ಬ್ಯಾಡರಹಳ್ಳಿ ಗ್ರಾಮದ ರೈತ ಮಾದೇಗೌಡ ಅವರ 6ಮೇಕೆಗಳನ್ನು ಚಿರತೆ ದಾಳಿ ನಡೆಸಿ ತಿಂದು ಹಾಕಿದೆ. ಗ್ರಾಮಸ್ಥರು ಕಾಡಂಚಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಎರಡು ಚಿರತೆಗಳು ದಾಳಿ ನಡೆಸಿದ್ದು ಮೇಕೆಗಳನ್ನು ತಿಂದು ಹಾಕಿದೆ. ಹಲಗೂರು ಹೋಬಳಿ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿಯಿಂದ ಜನ ಕಂಗೆಟ್ಟಿದ್ದು ಜೀವನೋಪಾಯಕ್ಕಾಗಿ ಮೇಕೆ ಸಾಕಣೆ ಮಾಡುತ್ತಿದ್ದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಕೂಡಲೇ ಅರಣ್ಯ ಇಲಾಖೆ ಚಿರತೆ ಹಾವಳಿಗೆ ಕಡಿವಾಣ ಹಾಕಿ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. : - – -