ಡ್ರಗ್ಸ್ ಮಾಫಿಯಾ ಸಂಜನಾ ಗಲ್ರಾನಿ ಆಪ್ತ ಜೋಯೆಬ್ ಸಿಸಿಬಿ ವಶಕ್ಕೆ ಬೆಂಗಳೂರು,ಸೆಪ್ಟೆಂಬರ್,29,2020(..): ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಈ ನಡುವೆ ಸಂಜನಾ ಆಪ್ತ ಜೋಯೆಬ್ ನನ್ನು ಸಿಸಿಬಿ ವಶಕ್ಕೆ ಪಡೆದಿದ್ದಾರೆ.ದೂಪನಹಳ್ಳಿ ಬಸ್ ನಿಲ್ದಾಣದಲ್ಲಿ ಡ್ರಗ್ಸ್ ರಿಸೀವ್ ಮಾಡ್ತಿದ್ದ ವೇಳೆ ಜೋಯೆಬ್ ನನ್ನು ವಶಕ್ಕೆ ಪಡೆಯಲಾಗಿದೆ. ಜೋಯೆಬ್ ಜತೆಗೆ ಆನಂದ್ ಎಂಬಾತನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಆನಂದ್ ಕೂಡ ಡ್ರಗ್ಸ್ ಡೀಲ್ ಮಾಡ್ತಿದ್ದ ಎಂದು ತಿಳಿದು ಬಂದಿದೆ. : -- ---