ಸಾಹಿತಿ ಜಿ.ಎಸ್.ಅಮೂರ ನಿಧನಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಸಂತಾಪ ಬೆಂಗಳೂರು,ಸೆಪ್ಟೆಂಬರ್,28,2020(..): ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಜಿ.ಎಸ್.ಅಮೂರ ಅವರ ನಿಧನಕ್ಕೆ ಕಸಾಪ ಅಧ್ಯಕ್ಷ ಮನು ಬಳಿಗಾರ್ ಸಂತಾಪ ಸೂಚಿಸಿದ್ದಾರೆ. ಖ್ಯಾತ ವಿಮರ್ಶಕ ಜಿ.ಎಸ್. ಅಮೂರ (96) ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಮೂರು ವಾರಗಳ ಹಿಂದೆಯಷ್ಟೇ ನೃಪತುಂಗ ಪ್ರಶಸ್ತಿಗೆ ಅಮೂರ ಭಾಜನರಾಗಿದ್ದರು ಎಂದು ಸ್ಮರಿಸಿದ್ದಾರೆ. : -..--- -