ಸಾಂಕೇತಿಕ ಪ್ರತಿಭಟನೆ ಮುಕ್ತಾಯ, ಬೆಂಗಳೂರು ಕಡೆಗೆ ಬಸ್ ಸಂಚಾರ ಆರಂಭ ಮೈಸೂರು,ಸೆಪ್ಟೆಂಬರ್,28,2020(..): ಗ್ರಾಮಾಂತರ ಬಸ್ ನಿಲ್ದಾಣದ ಬಳಿ ನಡೆಯುತ್ತಿದ್ದ ಸಾಂಕೇತಿಕ ಪ್ರತಿಭಟನೆ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಕಡೆಗೆ ಬಸ್ ಸಂಚಾರ ಆರಂಭ. ಬಸ್ ಹತ್ತಲು ಪ್ರಾಯಾಣಿಕರು ಮುಗಿಬಿದ್ದರು. ಗ್ರಾಮಾಂತರ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ರೈತರನ್ನ ಪೊಲೀಸರು ತಡೆದರು. ಹೀಗಾಗಿ, ಪ್ರತಿಭಟನೆಯನ್ನ ಟೌನ್ ಹಾಲ್ ಬಳೀ ನಡೆಸಲು ರೈತರು ತೀರ್ಮಾನಿಸಿದರು. ಪ್ರತಿಭಟನಕಾರರು ಬಸ್ ನಿಲ್ದಾಣದಿಂದ ತೆರಳಿದ ಬಳಿಕ ನಿಲ್ದಾಣವು ಸಂಪೂರ್ಣ ಖಾಲಿಖಾಲಿಯಾದಂತ್ತಾಯಿತು. ಈ ಸಂದರ್ಭ ಬಸ್ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಪ್ರಯಾಣಿಕರಿಗಾಗಿ ಕಾದು ಕುಳಿತ ಚಾಲಕರು, ಕಂಡಕ್ಟರ್‌ಗಳು ಬೆಳಿಗ್ಗೆ 9 ಘಂಟೆ ಬಳಿಕ ಬಸ್ ಸಂಚಾರ ಆರಂಭವಾಯಿತು. ಸಾರಿಗೆ ಆರಂಭವಾಯಿತು. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ವಿರಳವಾಗಿತ್ತು. ಪ್ರಯಾಣಿಕರಿಗಾಗಿ ಕಾದು ಕುಳಿತ ಬಸ್‌ ಚಾಲಕರು, ಕಂಡಕ್ಟರ್‌ಗಳು. ನಗರದ ವಿವಿಧೆಡೆಗೆ ನಗರ ಸಾರಿಗೆ ಬಸ್ ಗಳು ತೆರಳುತ್ತಿವೆ. : -------