ದಸರಾ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿ : ಮಾಜಿ ಸಂಸದ ಆರ್.ಧೃವನಾರಾಯಣ್ ಮೈಸೂರು,ಸೆಪ್ಟೆಂಬರ್,26,2020(..): ದಸರಾ ಮಹೋತ್ಸವಕ್ಕೆ ನೀಡುವ 15 ಕೋಟಿ ರೂ. ಹಣವನ್ನು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಈ ಬಾರಿ ದಸರಾ ಮಹೋತ್ಸವ ಮಾಡದಿದ್ದರೂ ಪರವಾಗಿಲ್ಲ. ಮಾಡಿದರೆ ಅದು ರಾಜಮನೆತನಕ್ಕೆ ಮಾತ್ರ ಸೀಮಿತವಾಗಲಿ. ರಾಜಮನೆತನದವರು ಪೂಜೆ ಮಾಡಿಕೊಂಡರೂ ತೊಂದರೆಯಿಲ್ಲ ಎಂದಿದ್ದಾರೆ. ಕೊರೊನಾ ಸೋಂಕಿತರಿರುವ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆ ನಿವಾರಿಸಲು ಆದ್ಯತೆ ಮೇರೆಗೆ ದಸರಾ ಅನುದಾನವನ್ನು ಬಳಸಿಕೊಳ್ಳಬೇಕು. ದಸರಾ ಆನೆಗಳ ಮಾವುತರು ಕಾವಾಡಿಗಳ ಆರೋಗ್ಯ ಅತಿ ಮುಖ್ಯವಾಗಿದ್ದು, ಈ‌ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. : ----- .