ಸೆ.28ರ ಕರ್ನಾಟಕ ಬಂದ್ ಗೆ ಜನಸಾಮಾನ್ಯರು ಬೆಂಬಲ ನೀಡಿ : ರೈತ ಮುಖಂಡ ಹೊಸಕೋಟೆ ಬಸವರಾಜು ಮೈಸೂರು,ಸೆಪ್ಟೆಂಬರ್,26,2020(..): ಸರ್ಕಾರದ ವಿರುದ್ಧ ಸೆ.28ರಂದು ನಡೆಯುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಸೇರಿದಂತೆ ಜನಸಾಮಾನ್ಯರು ಬೆಂಬಲ ನೀಡಬೇಕು ಎಂದು ರೈತ ಮುಖಂಡ ಹೊಸಕೋಟೆ ಬಸವರಾಜು ಮನವಿ ಮಾಡಿದರು. ನಗರದ ಜಲದರ್ಶಿನಿ ಆವರಣದಲ್ಲಿ ಶನಿವಾರ ಕರ್ನಾಟಕ ಬಂದ್ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಈ ಸಂದರ್ಭ ರೈತ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ಸೋಮವಾರ ಹಲವು ಸಂಘಟನೆಗಳು ಬೀದಿಗಿಳಿಯುತ್ತವೆ. ಬೆಳಗ್ಗೆ ೬ ರಿಂದ ಸಂಜೆ ೬ವರೆಗೂ ನಗರದಲ್ಲಿ ಬಂದ್ ಇರುತ್ತೆ. ಅಲ್ಲದೇ ತಾಲೂಕು ಕೇಂದ್ರಗಳಲ್ಕೂ ಪ್ರತಿಭಟನೆಗಳು ನಡೆಯುತ್ತದೆ. ಮಸೂದೆಯನ್ನು ಸರ್ಕಾರ ವಾಪಸ್ ಪಡೆಯಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ನಿರಂತರವಾಗಿ ನಡೆಯುವುದು. ಬಂದ್ ಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ. ಸಭೆಯಲ್ಲಿ ಜಿಲ್ಲೆಯ 15ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. : --- 28---