ಮೈಸೂರು ರಾಮಕೃಷ್ಣ ಆಶ್ರಮದಿಂದ ಸಾರ್ವಜನಿಕರಿಗೆ ಸಸಿಗಳ ಉಚಿತ ವಿತರಣೆ… ಮೈಸೂರು,ಸೆಪ್ಟಂಬರ್,27,2020(..):ಸ್ವಾಮಿ ಸುರೇಶಾನಂದ ಜೀ ಅವರ ಸ್ಮರಣಾರ್ಥವಾಗಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮ ಸಾರ್ವಜನಿಕರಿಗೆ ಸಸ್ಯ ಉಚಿತ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು. “ಮೈಸೂರು ಹಸಿರಾಗಲಿ ವಿವೇಕ ನಮ್ಮ ಉಸಿರಗಾಲಿ” ಎಂಬ ಧ್ಯೇಯದೊಂದಿಗೆ ಮೈಸೂರು ರಾಮಕೃಷ್ಣ ಆಶ್ರಮ ಆಯೋಜಿಸಿದ್ದ ಸಸ್ಯ ವಿತರಣೆ ಕಾರ್ಯಕ್ರಮಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಸಾರ್ವಜನಿಕರಿಗೆ ಸುಮಾರು 25 ಸಾವಿರ ಸಸಿಗಳನ್ನ ರಾಮಕೃಷ್ಣ ಆಶ್ರಮ ಉಚಿತವಾಗಿ ವಿತರಣೆ‌ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಶ್ರೀ ಮುಕ್ತಿದಾನಂದ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಸೇರಿ ಇತರರು ಉಪಸ್ಥಿತರಿದ್ದರು. : - - – –- --