ಅವಿಶ್ವಾಸ ಮಂಡನೆ ಹಿನ್ನಲೆ: ಬಿಜೆಪಿ ಶಾಸಕರಿಗೆ ವಿಪ್ ಜಾರಿ ಬೆಂಗಳೂರು, ಸೆಪ್ಟೆಂಬರ್ 26, 2020 (..):ಅವಿಶ್ವಾಸ ಮಂಡನೆ ಹಿನ್ನಲೆಯಲ್ಲಿ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಎಂ ಯಡಿಯೂರಪ್ಪ ವಿಪ್​ ಜಾರಿಮಾಡಿದ್ದಾರೆ. ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಕೋವಿಡ್ ಪಾಸಿಟಿವ್ ಇರುವವರು ದೂರವಿರಲು ವಿಶೇಷ ಅನುಮತಿ ಕೋರಿದವರನ್ನು ಹೊರತುಪಡಿಸಿ 80 ಶಾಸಕರು ಉಪಸ್ಥಿತರಿದ್ದರು. ಕಾಂಗ್ರೆಸ್​ಗಿಂತ ಬಿಜೆಪಿ ಸದಸ್ಯರು ಹೆಚ್ಚಿದ್ದರೂ ಕೊರೋನಾ ಹಿನ್ನಲೆ ಸರ್ಕಾರದ ಅನೇಕ ಸಚಿವರು, ಶಾಸಕರು ಹಾಜರಾಗುವಂತೆ ಇಲ್ಲ. ಈ ಹಿನ್ನಲೆ ಸರ್ಕಾರ ವಿಪ್​ ಜಾರಿ ಮೊರೆ ಹೋಗಿದೆ.