ಸಿಸಿಬಿ ವಿಚಾರಣೆಗೆ ಇನ್ನೂ ಹಾಜರಾಗದ ನಿರೂಪಕಿ ಅನುಶ್ರೀ : ಕೋರ್ಟ್ ಗೆ ಇಬ್ಬರು ಆರೋಪಿಗಳು ಹಾಜರು… ಮಂಗಳೂರು,ಸೆಪ್ಟಂಬರ್,25,2020(..):ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀ ಸಿಸಿಬಿ ವಿಚಾರಣೆಗೆ ಇನ್ನೂ ಹಾಜರಾಗದ ಹಿನ್ನಲೆ ಆರೋಪಿಗಳನ್ನು ಸಿಸಿಬಿ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕಿ ಅನುಶ್ರೀ ಅವರಿಗೆ ನಿನ್ನೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಆದರೆ ನಿರೂಪಕಿ ಅನುಶ್ರೀ ಸಿಸಿಬಿ ವಿಚಾರಣೆಗೆ ಇನ್ನೂ ಹಾಜರಾಗಿಲ್ಲ. ಅನುಶ್ರೀ ಅವರನ್ನ ಸಿಸಿಬಿ ವಿಚಾರಣೆ ನಡೆಬೇಕಾಗಿದ್ದು ಈ ಹಿನ್ನೆಲೆ, ಆರೋಪಿಗಳಾದ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್ ಇಬ್ಬರನ್ನು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪಾಂಡೇಶ್ವರದ ನಾರ್ಕೊಟಿಕ್ ಠಾಣೆಯಿಂದ ಆರೋಪಿಗಳನ್ನು ಶಿಫ್ಟ್ ಮಾಡಲಾಗಿದ್ದು, ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ. ಕಿಶೋರ್ ಶೆಟ್ಟಿ ಆಪ್ತ ತರುಣ್ ನೀಡಿದ ಮಾಹಿತಿ ಮೇರೆಗೆ ನಿರೂಪಕಿ ಅನುಶ್ರೀ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. : – –- - .