ಡ್ರಗ್ ಪ್ರಕರಣದ ವಿಚಾರಣೆ: ದೀಪಿಕಾಗೆ ಭಯ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನನಗೂ ಅವಕಾಶ ನೀಡಿ ಎಂದ ರಣವೀರ್ ಮುಂಬೈ, ಸೆಪ್ಟೆಂಬರ್ 25, 2020 (..):ದೀಪಿಕಾ ಜೊತೆ ವಿಚಾರಣೆಗೆ ತಾನೂ ಹಾಜರಾಗಲು ಅನುಮತಿ ನೀಡಿ ಎಂದು ರಣವೀರ್​ ಸಿಂಗ್​ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾದಕ ವಸ್ತು ಪ್ರಕರಣದಲ್ಲಿ ಇಂದು ಅಥವಾ ನಾಳೆ ದೀಪಿಕಾ ಪಡುಕೋಣೆ ಅವರ ವಿಚಾರಣೆ ಈ ಸಂಬಂಧ ರಣವೀರ್ ಕೂಡ ಅರ್ಜಿ ಸಲ್ಲಿಸಿ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ. ದೀಪಿಕಾಗೆ ಆಗಾಗ ಪ್ಯಾನಿಕ್​ ಆಯಟಾಕ್​ ಬರುತ್ತದೆ. ಜತೆಗೆ ಸಾಕಷ್ಟು ಭಯವಿದೆ. ಹೀಗಾಗಿ ಅವರೊಂದಿಗೆ ವಿಚಾರಣೆಯಲ್ಲಿ ಹಾಜರಾಗಲು ಅನುಮತಿ ನೀಡಿ ಎಂದು ರಣವೀರ್ ಅರ್ಜಿಯಲ್ಲಿ ಕೋರಿದ್ದಾರೆ ಎನ್ನಲಾಗಿದೆ. ಕಾನೂನಿ ಪ್ರಕಾರ ವಿಚಾರಣೆ ವೇಳೆ ಆರೋಪಿ ಜೊತೆ ಇರಲು ಅವಕಾಶವಿಲ್ಲ. ಆದರೆ , ಎನ್​ಸಿಬಿ ಕಚೇರಿಯ ಒಳಗೆ ಇರಲು ಅನುಮತಿ ನೀಡಬಹುದಾಗಿದೆ ಎನ್ನಲಾಗುತ್ತಿದೆ.