‘ರಾಧೆ ಶ್ಯಾಮ್​’ ಚಿತ್ರಕ್ಕೆ ಕಿಕ್ ಸ್ಟಾರ್ಟ್: ರೊಮ್ಯಾನ್ಸ್ ಮಾಡಲು ಪ್ರಭಾಸ್-ಪೂಜಾ ರೆಡಿ ! ಬೆಂಗಳೂರು, ಸೆಪ್ಟೆಂಬರ್ 24, 2020 (..):ಈಗ ಪ್ರಭಾಸ್​ ಅಭಿನಯದ ರಾಧೆ ಶ್ಯಾಮ್​ ಚಿತ್ರತಂಡ ಮತ್ತೆ ಕೆಲಸ ಆರಂಭಿಸಿದೆ. ಚಿತ್ರದ ಎರಡನೇ ಶೆಡ್ಯೂಲ್​ನ ಚಿತ್ರೀಕರಣ ಇಟಲಿಯಲ್ಲಿ ನಡೆಯಲಿದೆಯಂತೆ. 15 ದಿನಗಳ ಕಾಲ ಈ ಶೂಟಿಂಗ್​ ನಡೆಯಲಿದ್ದು, ಸದ್ಯದಲ್ಲೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಿನಿಮಾ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್​ ಆಗಲಿದೆ. ಮುರಳಿ ಶರ್ಮಾ, ಪ್ರಿಯದರ್ಶಿನಿ ಹಾಗೂ ಕಾಲಿವುಡ್​ ಹಾಸ್ಯ ನಟ ಸತ್ಯಂ ತಾರಾಗಣದಲ್ಲಿದ್ದಾರೆ. ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ.