ಡ್ರಗ್ಸ್ ಖರೀದಿ: ತಪ್ಪೊಪ್ಪಿಕೊಂಡ ರಿಯಾ ಮುಂಬೈ, ಸೆಪ್ಟೆಂಬರ್ 24, 2020 (..):ಡ್ರಗ್ಸ್ ಖರೀದಿಸಿದ್ದಾಗಿ ಜಾಮೀನು ಅರ್ಜಿಯಲ್ಲಿ ರಿಯಾ ಚಕ್ರವರ್ತಿ ತಪ್ಪೊಪ್ಪಿಕೊಂಡಿದ್ದಾರೆ. ಲಿವಿಂಗ್ ಇನ್ ರಿಲೇಷನ್ ಶಿಪ್ ಪಾರ್ಟನರ್ ಸುಶಾಂತ್ ಸಿಂಗ್ ರಜಪೂತ್ ಗಾಗಿ ಡ್ರಗ್ಸ್ ಖರೀದಿಸಿದ್ದೆ ಎಂದು ರಿಯಾ ಹೇಳಿಕೊಂಡಿದ್ದಾರೆ. ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನಿಗಾಗಿ 2ನೇ ಬಾರಿ ರಿಯಾ ಚಕ್ರವರ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಡ್ರಗ್ಸ್ ಸಂಬಂಧಿಸಿದಂತೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ನಾನು ಮತ್ತು ಸುಶಾಂತ್ ಡ್ರಗ್ಸ್ ಖರೀದಿಗಾಗಿ ಶೋವಿಕ್ ಚಕ್ರವರ್ತಿಯನ್ನು ಬಳಸಿಕೊಂಡಿದ್ದೆವು ಎಂದು ರಿಯಾ ತಿಳಿಸಿದ್ದಾರೆ.