ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಸಚಿವ ರಮೇಶ್ ಜಾರಕಿಹೊಳಿ‌… ಬೆಳಗಾವಿ,ಸೆಪ್ಟಂಬರ್,24,2020(..):ಕೋವಿಡ್ ಸೋಂಕಿನಿಂದ ಮೃತರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಅಂತಿಮ ನಮನ‌ ಸಲ್ಲಿಸಲು ಅವರ ಆಪ್ತ ಸ್ನೇಹಿತ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಟೊಂಕ ಕಟ್ಟಿ ನಿಂತು ಸುರೇಶ್ ಅಂಗಡಿ ಮತ್ತು ರಮೇಶ್ ಜಾರಕಿಹೊಳಿ‌ ಕಾರ್ಯ ನಿರ್ವಹಿಸುತ್ತಿದ್ದರು. ಅಗಲಿದ ಆಪ್ತಮಿತ್ರನ ಮೃತದೇಹದ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಸಚಿವ ಜಾರಕಿಹೊಳಿ‌ ಭಾಗಿಯಾಗಲಿದ್ದಾರೆ. : - - -- -