ಡ್ರಗ್ಸ್ ಮಾಫಿಯಾ ವಿಚಾರ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಕಿರುತೆರೆ ನಟಿ… ಬೆಂಗಳೂರು,ಸೆಪ್ಟೆಂಬರ್,22,2020(..): ನಾನು ಯಾವುದೇ ತಪ್ಪು ಮಾಡಿಲ್ಲ. ಕಿರುತೆರೆಯಲ್ಲಿ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮಾಹಿತಿಗಾಗಿ ವಿಚಾರಣೆಗೆ ಕರೆಸಲಾಗಿದೆ ಎಂದು ಕಿರುತೆರೆ ನಟಿ ಗೀತಾಭಟ್ ಹೇಳಿದ್ದಾರೆ.ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಕಿರುತೆರೆಯ ನಟ, ನಟಿಯರು ಭಾಗಿ ಹಿನ್ನೆಲೆಯಲ್ಲಿ ಐಎಸ್ ಡಿ ಅಧಿಕಾರಿಗಳಿಂದ ಸೆ.19ರಂದು ನಟಿ ಗೀತಾಭಟ್ ಗೆ ನೋಟಿಸ್ ನೀಡಲಾಗಿತ್ತು. ನಟಿ ಗೀತಾಭಟ್ ನೋಟಿಸ್ ಬಂದ ಹಿನ್ನೆಲೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು. ಈ ವೇಳೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಕಿರುತೆರೆಯಲ್ಲಿ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮಾಹಿತಿಗಾಗಿ ವಿಚಾರಣೆಗೆ ಕರೆಸಿರಬೇಕು. ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ನನಗೆ ಗೊತ್ತಿರುವ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ. : ----