ರೈತರಿಂದ ಪ್ರತಿಭಟನೆ: ಇದು ದುರುದ್ದೇಶದಿಂದ ಕೂಡಿದ ಹೋರಾಟ ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆಂಗಳೂರು,ಸೆಪ್ಟೆಂಬರ್,22,2020(..): ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸಂಬಂಧಿಸಿದಂತೆ ಸರಕಾರದ ನಿಲುವು ಸರಿಯಾಗಿದೆ. ಆದರೆ ರೈತರು ದುರುದ್ದೇಶಪೂರ್ವಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ಆಹೋರಾತ್ರಿ ಧರಣಿ ಹೋರಾಟ ಕುರಿತು ಪ್ರತಿಕ್ರಯಿಸಿರುವ ಸಚಿವರು ಪ್ರಚೋದನೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಲ್ಲರಿಗೂ ರೈತರಾಗುವುದಕ್ಕೆ ಅವಕಾಶ ದೊರೆಯಲಿದೆ. ಹೀಗಾಗಿ, ಸರಕಾರದ ಉದ್ದೇಶ ಸರಿಯಾಗಿದೆ. ಸರಕಾರವು ರೈತರ ಪರವಾಗಿದೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. :--- ..