ಜಿಂಕೆ ಮಾಂಸ ಮಾರಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್ … ಮೈಸೂರು,ಸೆಪ್ಟಂಬರ್ 22,2020(..):ಜಿಂಕೆ ಮಾಂಸ ಮಾರಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸೂಳಗೋಡು ಗ್ರಾಮದ ಮನು ಹಾಗೂ ಆಯರಹಳ್ಳಿ ಹಾಡಿಯ ಮಂಜು ಬಂಧಿತರು. ಬಂಧಿತರು ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗೆ ಜಿಂಕೆ ಬೇಟೆಯಾಡಿ ಮಾಂಸ ಸಾಗಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಎಸಿಎಫ್ ಸತೀಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಆನೆ ಚೌಕೂರು ವಲಯದ ಕೆಂಬಕೊಲ್ಲಿ ಬಳಿ ಬಂಧಿಸಲಾಗಿದೆ. ಬಂಧಿತರಿಂದ 20 ಕೆ.ಜಿ ಜಿಂಕೆ ಮಾಂಸ, ಸಿಂಗಲ್ ಬ್ಯಾರಲ್ ಗನ್ ವಶಕ್ಕೆ ಪಡೆಯಲಾಗಿದ್ದು, ದಾಳಿ ವೇಳೆ ಸೂಳಗೋಡಿನ ರಾಜು ಹಾಗೂ ಗೋಣಿಕೊಪ್ಪದ ಪೂವಯ್ಯ ಎಂಬ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿ ಆದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. : – - - - -