ಕೊಡಗು, ಕೇರಳ ಭಾಗದಲ್ಲಿ ಮಳೆ ಹಿನ್ನೆಲೆ: ಕಬಿನಿಗೆ ಒಳಹರಿವಿನ ಪ್ರಮಾಣ ಹೆಚ್ಚಳ ಮೈಸೂರು,ಸೆಪ್ಟೆಂಬರ್,21,2020(..): ಕೊಡಗು, ಕೇರಳ ಭಾಗದಲ್ಲಿ ಮಳೆ ಹಿನ್ನೆಲೆ ಕಬಿನಿ ಜಲಾಶಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284.00 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 2283.09 ಅಡಿ ತಲುಪಿದೆ. ಒಳಹರಿವು 28909 ಕ್ಯೂಸೆಕ್ ಮತ್ತು ಹೊರಹರಿವು 35000 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಸಾಮರ್ಥ್ಯ 19.52 ಟಿಎಂಸಿಯಾಗಿದ್ದು, ಜಲಾಶಯದಲ್ಲಿ ಇಂದು 18.92 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. : ------ -