ಪ್ರತಿಷ್ಠಿತ ಪ್ರಶಸ್ತಿ ನಿರೀಕ್ಷೆಯಲ್ಲಿ ಪ್ರಿಯಾಂಕ ! ಬೆಂಗಳೂರು, ಸೆಪ್ಟೆಂಬರ್ 21, 2020 (..): ಪ್ರಿಯಾಂಕಾ ಚೋಪ್ರಾ ಜೊನಾಸ್ ಪ್ರತಿಷ್ಠಿತ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಹೌದು. ಪ್ರಿಯಾಂಕ ಈ ಬಾರಿ ‘ಅತ್ಯುತ್ತಮ ಪೋಷಕ ನಟಿ’ ವಿಭಾಗದ ಉನ್ನತ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದಾರೆ. ‘ಬೇವಾಚ್’ ನಟಿ ತನ್ನ ಮುಂಬರುವ ಒಟಿಟಿ ಚಿತ್ರಕ್ಕಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ 2020ರ ನಿರೀಕ್ಷೆಯಲ್ಲಿ ಬಾಲಿವುಡ್ ಪ್ರಿಯಾಂಕ. ಅಂದಹಾಗೆ ಇದು ರಾಮಿನ್ ಬಹ್ರಾನಿ ನಿರ್ದೇಶನದ ಈ ಚಿತ್ರವು ಅರವಿಂದ್ ಅಡಿಗಾ ಅವರ ಅದೇ ಹೆಸರಿನ ಕಾದಂಬರಿಯ ರೂಪಾಂತರವಾಗಿರುವ ಸಿನಿಮಾ.