ಅಧಿವೇಶನ ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ – ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರು,ಸೆಪ್ಟೆಂಬರ್,21,2020(..): ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ. ಮೂರು ವಾರಕ್ಕೆ ಅಧಿವೇಶನ ವಿಸ್ತರಿಸುವಂತೆ ತಿಳಿಸಿದ್ದೇನೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕೊರೊನಾ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಅಧಿವೇಶನವನ್ನು ಮೊಟಕುಗೊಳಿಸುವಂತೆ ಆಡಳಿತ ಸರಕಾರವು ಒತ್ತಾಯಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೊರೊನಾ ಜಾಸ್ತಿಯಾಗುತ್ತಿರುವುದು ಸರಕಾರದಿಂದ. ಭೂ ಸುಧಾರಣೆ, ಕಾರ್ಮಿಕ ಕಾಯಿದೆ ತಿದ್ದುಪಡಿ ಸೇರಿದಂತೆ ಸುಮಾರು 30 ರಿಂದ 40 ಬಿಲ್ ಅನ್ನು ಪಾಸ್ ಮಾಡಲಾಗಿದೆ. ಈ ಕುರಿತು ಚರ್ಚಿಸುವುದು ಬೇಡವೇ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಈಗಾಗಲೇ ಅಧಿವೇಶನಕ್ಕೆ ನಿಗದಿಪಡಿಸಿರುವ ಸಮಯವನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಡಿಕೆಶಿ ಮತ್ತು ನನಗೆ ಸಿಎಂ ಕರೆ ಮಾಡಿರುವುದು ನಿಜ. ಒಟ್ಟಾರೆಯಾಗಿ ಅಧಿವೇಶನವನ್ನು ಮೊಟಕುಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. : ’------