ಉಡುಪಿ ಜಿಲ್ಲೆ ರೆಡ್ ಅಲರ್ಟ್ ಎತ್ತರ ಪ್ರದೇಶಕ್ಕೆ ತೆರಳುವಂತೆ ಡಿಸಿ ಸೂಚನೆ ಉಡುಪಿ,ಸೆಪ್ಟೆಂಬರ್,20,2020(,.): ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ತಗ್ಗು ಪ್ರದೇಶದ ಜನರು ಎತ್ತರ ಪ್ರದೇಶಕ್ಕೆ ತೆರಳುವಂತೆ ಡಿಸಿ ಜಗದೀಶ್ ಸೂಚನೆ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. 24 ಗಂಟೆಯಲ್ಲಿ ಸುಮಾರು 700 ಮನೆಗಳು ಮುಳುಗಡೆಯಾಗಿದ್ದು, 2500 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಎತ್ತರದ ಪ್ರದೇಶಗಳಿಗೆ ತೆರಳುವಂತೆ ತಿಳಿಸಿದ್ದಾರೆ. : ----- -