ರಾಜ್ಯಸಭೆ ಮೊದಲ ದಿನವೇ ಬೇಸರವಾಗಿದೆ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ಬೆಂಗಳೂರು,ಸೆಪ್ಟೆಂಬರ್,20,2020(..): ರಾಜ್ಯ ಸಭೆ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ತುಂಬ ಬೇಸರವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಮೊದಲ ದಿನದಂದು ರೈತರಿಗ ಸಂಬಧಿಸಿದ 3 ಬಿಲ್ ಮಂಡನೆಯಾಗಿದ್ದು, ಆ ಬಿಲ್ ಒಳಹೊಕ್ಕು ನೋಡಿದರೆ ಶೋಷಣೆ ಹೆಚ್ಚಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರವಿಲ್ಲ ಎಂಬ ನಿರ್ಧಾರ ತೆಗೆದುಕೊಂಡಿದ್ದು, ಈ ವಿಷಯ ಸಮಸ್ಯೆಯಾಗಿ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಈ ರೀತಿಯಾಗಿ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ನಾನು ಯಾರು ಸೂಪರ್ ಹೀರೊ ಎಂದು ಹೇಳುವುದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. : -- ---- .. -