ಸಂಜನಾ ಗಲ್ರಾನಿಗೆ ಕೊರೊನಾ ಆತಂಕ ಬೆಂಗಳೂರು,ಸೆಪ್ಟೆಂಬರ್,20,2020 : ನಟಿ ಸಂಜನಾ ಗಲ್ರಾನಿಗೆ ಕೊರೊನಾ ಆತಂಕ ಎದುರಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಅವರ ಜೊತೆಗಿದ್ದ ಮಹಿಳಾ ಪಿಎಸ್ ಐ ಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ನಟಿ ಸಂಜನಾ ಆತಂಕಕ್ಕೆ ಒಳಗಾಗಿದ್ದಾರೆ. ನ್ಯಾಯಾಂಗ ಬಂಧನಕ್ಕೆ ವಾಹನದಲ್ಲಿ ಕರೆತರುವ ವೇಳೆ ಮಹಿಳಾ ಪಿಎಸ್ ಐ ಅವರನ್ನು ಒರಗಿ ಮಲಗಿದ್ದರು. ಹೀಗಾಗಿ, ಮಹಿಳಾ ಪಿಎಸ್ ಐ ಗೆ ಕೊರೊನಾ ಬಂದಿರುವುದರಿಂದ ಸಂಜನಾ ಅವರು ತಮಗೂ ಕೊರೊನಾ ಪಾಸಿಟಿವ್ ಬರುವ ಆತಂಕವ್ಯಕ್ತಪಡಿಸಿದ್ದಾರೆ. ಹೀಗಾಗಿ, ನ್ಯಾಯಾಂಗ ಬಂಧನದಲ್ಲಿಯೇ ಕೊರೊನಾ ಟೆಸ್ಟ್ ಮಾಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. : --