ಮೈಸೂರಿನಲ್ಲಿ ಆಯುಷ್ ಕೋವಿಡ್-19 ಆರೈಕೆ ಕೇಂದ್ರ ಉದ್ಘಾಟನೆ… ಮೈಸೂರು,ಸೆಪ್ಟಂಬರ್,19,2020(..): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆ ಆಯುಷ್ ಇಲಾಖೆಯಿಂದ ಕೆಎಸ್ ಒಯುನಲ್ಲಿ ಕೋವಿಡ್-19 ಆರೈಕೆ ಕೇಂದ್ರವನ್ನ ತೆರೆಯಲಾಗಿದೆ. ಮೈಸೂರಿನ ಕೆಎಸ್ಒಯುನಲ್ಲಿ ಪ್ರಾರಂಭಿಸಲಾಗಿರುವ ಆಯುಷ್ ಕೋವಿಡ್ ಕೇರ್ ಸೆಂಟರ್ ಅನ್ನ ಶಾಸಕ ಎಲ್. ನಾಗೇಂದ್ರ ಉದ್ಘಾಟಿಸಿದರು. ಈ ಕೋವಿಡ್ ಆರೈಕೆ ಕೇಂದ್ರ ಆಯುಷ್ ಇಲಾಖೆಯಿಂದ ನಿರ್ಮಾಣವಾಗಿದ್ದು, ಇಲ್ಲಿ ಕೊರೋನಾ ಸೋಂಕಿತರಿಗೆ ಎರಡು ವಿಭಾಗದಲ್ಲಿ ಚಿಕಿತ್ಸೆ‌ ನೀಡಲಾಗುತ್ತದೆ. ಹಸಿರು ವಲಯ ಮತ್ತು ಕೆಂಪು ವಲಯ ಎರಡು ವಲಯಗಳಲ್ಲಿ ಕೊರೋನಾ ಸೋಂಕಿತರನ್ನ ಆರೈಕೆ ಮಾಡಲಾಗುತ್ತದೆ. : --19- - – .