ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ… ಮೈಸೂರು, ಸೆಪ್ಟಂಬರ್,19,2020(..):ಮೈಸೂರು ಕೃಷ್ಣರಾಜ ಕ್ಷೇತ್ರದ 52ನೇ ಮತ್ತು 53ನೇ ವಾರ್ಡ್ ಗಳ ಭಾಗದಲ್ಲಿ ಶಾಸಕ ಎಸ್.ಎ ರಾಮದಾಸ್ ಅವರು ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೃಷ್ಣರಾಜ ಕ್ಷೇತ್ರದ ಸಿದ್ದಾರ್ಥ್ ಬಡಾವಣೆ, ದಾಮೋದರ್ ಬಡಾವಣೆಯ 25 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಹಾಗೆಯೇ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ 10 ಲಕ್ಷ ರೂ. ವೆಚ್ಚದ ನೀರಿನ ಘಟಕ ಕಾಮಗಾರಿ, ಜಾಕಿಕ್ವಾಟ್ರಸ್ ನಗರಪಾಲಿಕೆಯ 9 ಲಕ್ಷ ರೂ. ವೆಚ್ಛದ ಡಾಂಬರೀಕರಣಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ರೂಪ ಯೋಗೇಶ್ ,ಛಾಯಧೇವಿ ನವೀವ್ ಮತ್ತಿತರರು ಉಪಸ್ಥಿತರಿದ್ದರು. : - - – - .