ಮೈಸೂರಿನಲ್ಲಿ ಇಬ್ಬರು ಸರಗಳ್ಳರ ಬಂಧನ… ಮೈಸೂರು,ಸೆಪ್ಟಂಬರ್,19,2020(..): ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಸರಗಳ್ಳರನ್ನ ಬಂಧಿಸಿದ್ದಾರೆ. ಆರ್. ಎಸ್. ನಾಯ್ಡು ನಗರದ ಸನ್ನಿ ಡೊನಾಲ್ಡ್ ಮತ್ತು ಹಿನಕಲ್ ಗ್ರಾಮದ ಕಿರಣ್ ಬಂಧಿತರು. ಬಂಧಿತ ಆರೋಪಿಗಳು ಐದು ಸರಗಳನ್ನು ಕಳ್ಳತನ ಮಾಡಿದ್ದರು. ಇದೀಗ ಮೈಸೂರು ಗ್ರಾಮಾಂತರ ಸಿಪಿಐ ಜೀವನ್ ಮತ್ತು ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. : – - –