ತಾಯಿ ಸ್ಥಾನದಲ್ಲಿರುವ ಸಿಎಂ ಮನೆ ಮಕ್ಕಳಿಗೆ ಅನ್ಯಾಯ ಮಾಡಲ್ಲ -ಸಚಿವ ಸಂಪುಟ ವಿಸ್ತರಣೆ ಕುರಿತು ಶಾಸಕ ರಾಮದಾಸ್ ಪ್ರತಿಕ್ರಿಯೆ… ಮೈಸೂರು,ಸೆಪ್ಟಂಬರ್,ಸೆಪ್ಟಂಬರ್,18,2020(..):ರಾಜ್ಯ ಸಚಿವ ಸಂಪುಟ ವಿಸ್ತರಣೆ ಪುನರಚನೆ ವಿಚಾರ ಚರ್ಚಿಸಲು ದೆಹಲಿಗೆ ತೆರಳಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಶಾಸಕ ಎಸ್.ಎ ರಾಮದಾಸ್ ತಾಯಿ ಸ್ಥಾನಕ್ಕೆ ಹೋಲಿಕೆ ಮಾಡಿದ್ದಾರೆ. ತಾಯಿ ಸ್ಥಾನದಲ್ಲಿರುವ ಸಿಎಂ ಅನ್ಯಾಯ ಮಾಡಲ್ಲ. ಮನೆ ಮಕ್ಕಳಿಗೆ ಅನ್ಯಾಯ ಮಾಡಲ್ಲ. ಮನೆಯವರಿಗೆ ಊಟ ಹಾಕಬೇಕೋ ಅಥವಾ ಅತಿಥಿಗಳಿಗೆ ಊಟ ಹಾಕಬೇಕೋ ಎಂಬುದನ್ನ ತಾಯಿ ನಿರ್ಧರಿಸುತ್ತಾರೆ ಎಂದು ಶಾಸಕ ಎಸ್.ಎ ರಾಮದಾಸ್ ಸಂಪುಟ ವಿಸ್ತರಣೆ ಕುರಿತು ಮಾತುಗಳನ್ನಾಡಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಕೊಡದಿದ್ದರೂ ಖುಷಿಯಿಂದ ಇರುತ್ತೇನೆ. ಸಿಎಂ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. : - - - – .