ಪ್ರಧಾನಿ ಮೋದಿ ಅವರ 6 ವರ್ಷದ ಆಡಳಿತ ತೃಪ್ತಿ ತಂದಿದೆ- ಸಾಹಿತಿ ಎಸ್.ಎಲ್ ಭೈರಪ್ಪ… ಮೈಸೂರು,ಸೆಪ್ಟಂಬರ್,17,2020(..):ಪ್ರಧಾನಿ ನರೇಂದ್ರ ಮೋದಿಯವರ 6 ವರ್ಷದ ಆಡಳಿತ ತೃಪ್ತಿ ತಂದಿದೆ.ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನಾವನ್ನ ಪ್ರಧಾನಿ ಮೋದಿ ಅವರು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಾಹಿತಿ ಎಸ್.ಎಲ್ ಭೈರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಇಂದು ಮಾತನಾಡಿದ ಸಾಹಿತಿ ಎಸ್.ಎಲ್.ಭೈರಪ್ಪ, ದೇಶ ನಡೆಸಲು ಮೋದಿಗಿಂತ ಬುದ್ದಿವಂತರು ಯಾರಿದ್ದಾರೆ. ರಾಜ್ಯದ ಪಾಲಿನ ಹಣವನ್ನ ಬೇರೆ ಬೇರೆ ರೂಪದಲ್ಲಿ ಕೊಟ್ಟಿದ್ದಾರೆ. ಜಿ.ಎಸ್.ಟಿ.ಕೊಟ್ಟಿಲ್ಲ ಅಂತ ಯಾಕೆ ದೂಷಿಸಬೇಕು. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದರು. ಡ್ರಗ್ಸ್ ಸೇವನೆಯಿಂದ ಯುವಕರು ದಾರಿ ತಪ್ಪುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾಹಿತಿ ಎಸ್.ಎಲ್ ಭೈರಪ್ಪ, ಯುವಕರು ಮೋದಿ ಅವರನ್ನ ಮಾಡೆಲ್ ಆಗಿ ಇಟ್ಟುಕೊಳ್ಳಬೇಕು. ಯುವಕರು ದಿನದಲ್ಲಿ 18 ಗಂಟೆ ಕೆಲಸ ಮಾಡಬೇಕು. ಡ್ರಗ್ಸ್ ನಿಂದ ಯುವಕರು ಹಾಳಾಗುವುದಕ್ಕು ಮೋದಿಗೂ ಸಂಬಂಧವಿಲ್ಲ. ಮೋದಿ ಯವರು ಏನೇ ಮಾಡಿದ್ರೂ ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಮೊನ್ನೆ ರಾಹುಲ್ ಗಾಂಧಿ ಚೀನಾ ಗಡಿ ವಿಚಾರದಲ್ಲಿ ಟೀಕೆ ಮಾಡಿದ್ದಾರೆ ಎಂದು ಎಸ್.ಎಲ್ ಭೈರಪ್ಪ ಕಿಡಿಕಾರಿದರು. : ’ -6- - – -