ಪ್ರವಾಸಕ್ಕೆ ತೆರಳಿದ್ದ ಮೈಸೂರು ಮೂಲದ ಇಬ್ಬರು ಯುವಕರು ನೀರುಪಾಲು… ಮೈಸೂರು,ಸೆಪ್ಟಂಬರ್,17,2020(..):ಪ್ರವಾಸಕ್ಕೆಂದು ತೆರಳಿದ್ದ ಮೈಸೂರು ಮೂಲದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ. ಸುಹಾಸ್ (17) ಮೃತ ಯುವಕ. ಮಂಡ್ಯ ಮೂಲದ ಬಾಲಕ ಉಲ್ಲಾಸ್ (15) ಕಣ್ಮರೆಯಾಗಿದ್ದಾನೆ. ಕಣ್ಮರೆಯಾಗಿರುವ ಬಾಲಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮೈಸೂರಿನಿಂದ 8 ಮಂದಿ ಯುವಕರು ಗೋಕರ್ಣ ಪ್ರವಾಸಕ್ಕೆ ತೆರಳಿದ್ದರು. ಈ ನಡುವೆ ಗೋಕರ್ಣದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರೂ ಯುವಕರು ಸಮುದ್ರಕ್ಕಿಳಿದಿದ್ದರು. ಈ ವೇಳೆ ಓರ್ವ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮತ್ತೋರ್ವ ಯುವಕ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – ---