ತೆಂಗಿನ ಕಾಯಿ ಕಳ್ಳತನ ಮಾಡುತ್ತಿದ್ದ 7 ಮಂದಿ ಅರೆಸ್ಟ್… ಮೈಸೂರು,ಸೆಪ್ಟಂಬರ್,17,2020(..):ಹೊಲ ಗದ್ದೆಗಳಲ್ಲಿ ತೆಂಗಿನಕಾಯಿ ಕದಿಯುತ್ತಿದ್ದ 7 ಮಂದಿ ಕಳ್ಳರನ್ನು ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ನಗರದ ಪ್ರದೀಪ್, ಸೋಮಶೇಖರ್, ರಾಜು, ಪ್ರಜ್ವಲ್, ಮಹಾದೇವ್, ಯೋಗೇಶ್, ಅಭಿ ಬಂಧಿತ ಆರೋಪಿಗಳು. ಬಂಧಿತರು ಕೆ.ಆರ್.ನಗರ ತಾಲ್ಲೂಕಿನ ಸುತ್ತಮುತ್ತ ಹೊಲ ಗದ್ದೆಗಳಲ್ಲಿ ತೆಂಗಿನಕಾಯಿ ಕದಿಯುತ್ತಿದ್ದರು. ಈ ನಡುವೆ ಸಾಲಿಗ್ರಾಮ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 7ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 60ಸಾವಿರ ನಗದು ಹಾಗೂ ಎರಡು ಗೂಡ್ಸ್ ಆಟೋವನ್ನ ವಶಕ್ಕೆ ಪಡೆದಿದ್ದು ಈ ಕುರಿತು ಸಾಲಿಗ್ರಾಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - 7 - - –. -