ನಾಳೆ ಮೈಸೂರಿನಲ್ಲಿ ಪಾಳೆಯಗಾರರ ವೀರಗಲ್ಲುಗಳ ಸ್ಮರಣೋತ್ಸವ ಕಾರ್ಯಕ್ರಮ… ಮೈಸೂರು,ಸೆಪ್ಟಂಬರ್,16,2020(..): ನಾಳೆ ಮೈಸೂರಿನಲ್ಲಿ ಪಾಳೆಗಾರರ ವೀರಗಲ್ಲು ಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದಿನಾಂಕ 17/9/2020 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ವೀರನಗೆರೆಯ ಮಹದೇವಮ್ಮ ದೇವಸ್ಥಾನದ ಆವರಣದಲ್ಲಿ ಪಾಳೆಗಾರರ ವೀರಗಲ್ಲುಗಳ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ ಇತಿಹಾಸದಲ್ಲಿ ವೀರ ಮರಣ ಹೊಂದಿದ ನಾಯಕ ಕಲಿಗಳ ವೀರಗಲ್ಲುಗಳಿಗೆ ಪುಷ್ಪನಮನದ ಮೂಲಕ ಪುಣ್ಯಸ್ಮರಣೆ ಮಾಡಲಿದ್ದೇವೆ ಎಂದು ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ ತಿಳಿಸಿದ್ದಾರೆ. ಐತಿಹಾಸಿಕ ಹಿನ್ನೆಲೆ ಮೈಸೂರು ರಾಜಪರಿವಾರ ನಾಯಕರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹಾದಿಯಲ್ಲಿ ಪಾಳೆಯಗಾರರ ವೀರಗಲ್ಲುಗಳಿಗೆ ಸ್ಮರಣೋತ್ಸವದ ಮೂಲಕ ಮೈಸೂರು ನಾಯಕರ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನವಾಗಿ ನಾಯಕರ ಸ್ಮರಣೆ ಮಾಡುತ್ತಿದ್ದೇವೆ ಎಂದು ಪಡುವಾರಹಳ್ಳಿ ಎಂ ರಾಮಕೃಷ್ಣ ತಿಳಿಸಿದ್ದಾರೆ. : - - – – -