ಡ್ರಗ್ಸ್ ಪೆಡ್ಲರ್ ಗಳ ಜೊತೆ ಗುರುತಿಸಿಕೊಂಡವರಿಗೆ ಸಮನ್ಸ್ ಜಾರಿ ಮಾಡಲಿ – ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್… ಬೆಂಗಳೂರು,ಸೆಪ್ಟೆಂಬರ್,16,2020(..): ಡ್ರಗ್ಸ್ ಪ್ರಕರಣವು ತಲೆ ತಗ್ಗಿಸುವ ವಿಚಾರವಾಗಿದ್ದು, ಮಾತಾಡಲು ಸಾಕಷ್ಟು ವಿಷಯಗಳಿದೆ. ಆದರೆ, ಸದ್ಯಕ್ಕೆ ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇಸರವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಪೆಡ್ಲರ್ ಗಳ ಜೊತೆಗೆ ಗುರುತಿಸಿಕೊಂಡಿರುವವರಿಗೆ ಸಮನ್ಸ್ ಜಾರಿ ಮಾಡುವಂತೆ ಹೇಳಿದ್ದಾರೆ. ರಾಹುಲ್ ಜೊತೆಗೆ ಕೆಲವರು ಫೋಟೋ ತೆಗೆಸಿಕೊಂಡಿದ್ದು, ನನ್ನನ್ನೂ ಸೇರಿದಂತೆ ಎಲ್ಲರಿಗೂ ಸಮನ್ಸ್ ಜಾರಿ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. : ----