ಮುಷ್ಕರ ನಿರತ ವೈದ್ಯರ ಜೊತೆಗಿನ ಸಭೆ ಅಂತ್ಯ: ವೈದ್ಯರ ಬೇಡಿಕೆ ಈಡೇರಿಕೆಗೆ ನಿರ್ಧಾರ… ಬೆಂಗಳೂರು,ಸೆಪ್ಟಂಬರ್,15,2020(..):ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವೈದ್ಯರು ಮುಷ್ಕರ ಹೂಡಿದ ಹಿನ್ನೆಲೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಸಭೆ ನಡೆಯಿತು. ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ನೇತ್ರತ್ವದಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಇಂದು ನಡೆದ ಸಭೆ ಸುಖಾಂತ್ಯವಾಗಿದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ವೈದ್ಯರ ಸಂಘವು ತಮ್ಮ ಇತರೆ ಸದಸ್ಯರ ಜೊತೆ ಸಭೆ ನಡೆಸಿ ಇದೇ 18 ರಂದು ಅಂತಿಮ ನಿರ್ಣಯ ಪ್ರಕಟಿಸಲಿದೆ. ಸಭೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವೈದ್ಯಕೀಯ ಸಚಿವರಾದ ಸುಧಾಕರ್, ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ಜಾವೇದ್ ಅಖ್ತರ್, ವೈದ್ಯರ ಸಂಘದ ಪ್ರಮುಖರು ಉಪಸ್ಥಿತರಿದ್ದರು. : –- – – – .