ಡ್ರಗ್ಸ್ ಮಾಫಿಯಾ ಹೌಸ್ ಆಫ್ ಲೈಫ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ಬೆಂಗಳೂರು,ಸೆಪ್ಟೆಂಬರ್,15,2020(..): ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಸೆಲೆಬ್ರೆಟಿಗಳ ಹಾಟ್ ಸ್ಪಾಟ್ ಆಗಿದ್ದ ಆದಿತ್ಯ ಆಳ್ವಾ ಒಡೆತನದ ಹೌಸ್ ಆಫ್ ಲೈಫ್ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಅವರ ಒಡೆತನದ ಬೆಂಗಳೂರಿನ ಹೆಬ್ಬಾಳದ ಬಳಿಯಿರುವ ರೆಸಾರ್ಟ್ ನಲ್ಲಿ ಭರ್ಜರಿ ಪಾರ್ಟಿಗಳು ನಡೆಯುತ್ತಿದ್ದವು ಎಂಬ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ರೆಸಾರ್ಟ್ ನಲ್ಲಿ ಕುಟುಂಬದವರು ಯಾರು ಇಲ್ಲದ ಕಾರಣ. ಅಲ್ಲಿನ ಕೆಲಸದವರಿಗೆ ಸರ್ಚ್ ವಾರೆಂಟ್ ತೋರಿಸಿ ಅಧಿಕಾರಿಗಳು ದಾಳಿ ಆರಂಭಿಸಿದ್ದಾರೆ. ಸಿಸಿಬಿ ಅಧಿಕಾರಿ ಅಂಜುಮಾಲಾ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಡ್ರಗ್ ಕೇಸ್ ನಲ್ಲಿ ಆದಿತ್ಯ ಆಳ್ವಾ 6 ಆರೋಪಿಯಾಗಿದ್ದು, ಅವರ ಒಡೆತನದ ರೆಸಾರ್ಟ್ 6 ಎಕರೆ ವಿಸ್ತೀರ್ಣದವಿದೆ. ರೆಸಾರ್ಟ್ ಮ್ಯಾನೇಜರ್ ರಾಮದಾಸ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಪಾರ್ಟಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗತ್ತಿದೆ. : ------