ಪ್ರಶಾಂತ್ ಸಂಬರಗಿ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ : ಶಾಸಕ ಜಮೀರ್ ಅಹ್ಮದ್ ಖಾನ್ ಬೆಂಗಳೂರು,ಸೆಪ್ಟೆಂಬರ್,14,2020(..): ಪ್ರಶಾಂತ್ ಸಂಬರಗಿ ಒಳ್ಳೆ ಕೆಲಸ ಮಾಡಿದ್ದು, ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಪ್ರಶಾಂತ್ ಸಂಬರಗಿ ಮೇಲೆ ಮಾನನಷ್ಟ ಮೊಕದ್ಧಮೆ ದಾಖಲಿಸಿದ್ದೇನೆ. ಅವರು ಫಾಝಿಲ್ ಗೂ ನನಗೂ ಸಂಬಂಧವಿದೆ ಎಂದು ಆರೋಪ ಮಾಡಿದ್ದಾರೆ. ಆದರೆ, ನನ್ನ ಮೇಲೆ ಡ್ರಗ್ಸ್ ಆರೋಪ ಮಾಡಿಲ್ಲ ಎಂದಿದ್ದಾರೆ. ನನ್ನ ಜೊತೆಗೆ ಯಾರ್ಯಾರೋ ಫೋಟೊ ತೆಗೆಸಿಕೊಂಡಿದ್ದಾರೆ. ಫಾಝಿಲ್ ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆಯಾಗಲಿ. ನನಗೂ ಫಾಝಿಲ್ ಗೂ ಯಾವುದೇ ಸಂಬಂಧವಿಲ್ಲ. ಯಾರೇ ತಪ್ಪು ಮಾಡಿದರೂ,ಶಿಕ್ಷೆಯಾಗಲಿ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. : -----