ಡ್ರಗ್ಸ್ ಮಾಫಿಯಾ ತನಿಖೆ ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು : ಕೃಷ್ಣಭೈರೇಗೌಡ ಕೋಲಾರ, ಸೆಪ್ಟೆಂಬರ್,13,2020(..): ಡ್ರಗ್ಸ್ ಮಾಫಿಯಾ ತನಿಖೆಯು ಪ್ರಚಾರಕ್ಕೆ ಮಾತ್ರವೇ ಸೀಮಿತವಾಗಬಾರದು. ಡ್ರಗ್ಸ್ ದಂಧೆಯನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾವನ್ನು ಸರಕಾರವು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವ ಅನುಮಾನವಿದೆ. ಈ ಮಾಫಿಯಾದಲ್ಲಿ ಯಾವುದೇ ಪಕ್ಷದವರು ಇದ್ದರೂ ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಊಹಾಪೋಹಗಳನ್ನು ಆಧಾರಿಸಿ ವ್ಯಕ್ತಿಯೊಬ್ಬರ ಸಾಮಾಜಿಕ ಜೀವನ ಹಾಳುವಮಾಡಬಾರದು.ತನಿಖೆ, ಸಾಕ್ಷ್ಯಾಧಾರ ರಹಿತವಾಗಿ ಆರೋಪಿಸಬಾರದು. ಪ್ರಕರಣದಲ್ಲಿ ಯಾರೆ ಇದ್ದರೂ ರಕ್ಷಣೆ ಮಾಡಬಾರದು ಎಂದು ಹೇಳಿದರು. : -----